Telegram Join My Telegram WhatsApp Join My WhatsApp

Bellary DCC Bank Recruitment 2026: Apply Online for 82 Posts Open Now ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಸುವರ್ಣಾವಕಾಶ!

Bellary DCC Bank Recruitment 2026: Apply Online for 82 Posts Open Now: ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026 – 82 ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಮತ್ತು ಇತರೆ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ:

       ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (Bellary DCC Bank), ಹೊಸಪೇಟೆ ವತಿಯಿಂದ ಮ್ಯಾನೇಜರ್ / ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು ಮತ್ತು ಜೂನಿಯರ್ ಸರ್ವೆಂಟ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆ 2026 ಅನ್ನು ದಿನಾಂಕ 01 ಜೂನ್ 2026 ರಂದು ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 82 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಸಂಬಂಧಿತ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ದಿನಾಂಕ 01-06-2026 ರಿಂದ 30-06-2026 ರವರೆಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಆದ [https://www.bellarydcc.bank.in](https://www.bellarydcc.bank.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯೋಮಿತಿ 40 ವರ್ಷಗಳಾಗಿವೆ. ಈ ನೇಮಕಾತಿಯು ಕರ್ನಾಟಕ ಸರ್ಕಾರದ ಸಹಕಾರ ಬ್ಯಾಂಕ್ ನೇಮಕಾತಿ ಆದೇಶಗಳಿಗೆ ಅನುಗುಣವಾಗಿ ನಡೆಯುತ್ತಿದ್ದು, ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಪ್ರಕಟಣೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವಂತೆ ಸೂಚಿಸಲಾಗಿದೆ.

ಬಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026 – ಒಂದು ಅವಲೋಕನ

ವಿವರ                 ಮಾಹಿತಿ
ಸಂಸ್ಥೆಯ ಹೆಸರು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (ಬೆಳ್ಳಾರಿ ಡಿಸಿಸಿ ಬ್ಯಾಂಕ್), ಹೊಸಪೇಟೆ
ಹುದ್ದೆಗಳ ಹೆಸರು ಮ್ಯಾನೇಜರ್ / ಪ್ರಥಮ ದರ್ಜೆ ಸಹಾಯಕರು; ದ್ವಿತೀಯ ದರ್ಜೆ ಸಹಾಯಕರು; ವಾಹನ ಚಾಲಕರು; ಜೂನಿಯರ್ ಸರ್ವೆಂಟ್
ಒಟ್ಟು ಖಾಲಿ ಹುದ್ದೆಗಳು 82
ಅರ್ಜಿ ಸಲ್ಲಿಸುವ ವಿಧಾನ ಆನ್‌ಲೈನ್ ಮಾತ್ರ ([https://www.bellarydcc.bank.in](https://www.bellarydcc.bank.in) ಮೂಲಕ)
ಆಯ್ಕೆ ವಿಧಾನ ಲಿಖಿತ ಪರೀಕ್ಷೆ + ಸಂದರ್ಶನ
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 01-06-2026
ಅರ್ಜಿ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ 30-06-2026 (ರಾತ್ರಿ 11:59 ರೊಳಗೆ)
ಲಿಖಿತ ಪರೀಕ್ಷೆ ದಿನಾಂಕ ಎಸ್‌ಎಮ್‌ಎಸ್/ಇಮೇಲ್/ಬ್ಯಾಂಕ್ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು
ಸಂದರ್ಶನ ದಿನಾಂಕ ಲಿಖಿತ ಪರೀಕ್ಷೆಯ ಫಲಿತಾಂಶದ ನಂತರ ಪ್ರಕಟಿಸಲಾಗುವುದು

 

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

ಒಟ್ಟು 82 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಪ್ರಾದೇಶಿಕ (371(J)) ಮತ್ತು ಸಾಮಾನ್ಯ ಕರ್ನಾಟಕ (Non-371(J)) ಕೋಟಾಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. ಇವುಗಳನ್ನು ಸಾಮಾನ್ಯ, ಮಹಿಳೆ, ಗ್ರಾಮೀಣ, ಮಾಜಿ ಸೈನಿಕ, ಕನ್ನಡ ಮಾಧ್ಯಮ, ಯೋಜನೆ ನಿರಾಶ್ರಿತ ಮತ್ತು ವಿಕಲಚೇತನ ಮೀಸಲಾತಿಗಳಾಗಿ ವರ್ಗೀಕರಿಸಲಾಗಿದೆ.

1. ಮ್ಯಾನೇಜರ್ / ಪ್ರಥಮ ದರ್ಜೆ ಸಹಾಯಕರು (22 ಹುದ್ದೆಗಳು)
  • ವೇತನ ಶ್ರೇಣಿ: ರೂ. 44,425 ರಿಂದ ರೂ. 83,700 (ನಿಯಮಿತ ವೇತನ ಹೆಚ್ಚಳದೊಂದಿಗೆ)
  • ಕಲ್ಯಾಣ ಕರ್ನಾಟಕ ವಲಯ (371(J)): 18 ಹುದ್ದೆಗಳು
  • ಬಾಕಿ ಉಳಿದ ವಲಯ (Non-371(J)): 4 ಹುದ್ದೆಗಳು
2. ದ್ವಿತೀಯ ದರ್ಜೆ ಸಹಾಯಕರು (28 ಹುದ್ದೆಗಳು)
  • ವೇತನ ಶ್ರೇಣಿ: ರೂ. 34,100 ರಿಂದ ರೂ. 67,600
  • ಕಲ್ಯಾಣ ಕರ್ನಾಟಕ ವಲಯ (371(J)): 22 ಹುದ್ದೆಗಳು
  • ಬಾಕಿ ಉಳಿದ ವಲಯ (Non-371(J)): 6 ಹುದ್ದೆಗಳು
3. ವಾಹನ ಚಾಲಕರು (1 ಹುದ್ದೆ)
  • ವೇತನ ಶ್ರೇಣಿ: ರೂ. 31,775 ರಿಂದ ರೂ. 61,300
  • ಕಲ್ಯಾಣ ಕರ್ನಾಟಕ ವಲಯ (371(J)): 1 ಹುದ್ದೆ ಮಾತ್ರ
4. ಜೂನಿಯರ್ ಸರ್ವೆಂಟ್ (31 ಹುದ್ದೆಗಳು)
  • ವೇತನ ಶ್ರೇಣಿ: ರೂ. 29,600 ರಿಂದ ರೂ. 52,800
  • ಕಲ್ಯಾಣ ಕರ್ನಾಟಕ ವಲಯ (371(J)): 26 ಹುದ್ದೆಗಳು
  • ಬಾಕಿ ಉಳಿದ ವಲಯ (Non-371(J)): 5 ಹುದ್ದೆಗಳು

ಅರ್ಹತಾ ಮಾನದಂಡಗಳು

        ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ಇದರೊಂದಿಗೆ ಎಲ್ಲಾ ಹುದ್ದೆಗಳಿಗೂ ಕನ್ನಡ ಭಾಷೆಯ ಜ್ಞಾನ ಕಡ್ಡಾಯವಾಗಿದೆ (ಕನ್ನಡ ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಬರಬೇಕು).

  1. ಮ್ಯಾನೇಜರ್ / ಪ್ರಥಮ ದರ್ಜೆ ಸಹಾಯಕರು: ಭಾರತದಲ್ಲಿ ಕಾನೂನುಬದ್ಧವಾಗಿ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು. ಕನ್ನಡ ಭಾಷಾ ಜ್ಞಾನ ಮತ್ತು ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಅತ್ಯಗತ್ಯ.
  2. ದ್ವಿತೀಯ ದರ್ಜೆ ಸಹಾಯಕರು: ಮಾನ್ಯತೆ ಪಡೆದ ಸಂಸ್ಥೆಯಿಂದ ದ್ವಿತೀಯ ಪಿಯುಸಿ (Second PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆ ಹಾಗೂ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು.
  3. ವಾಹನ ಚಾಲಕರು: ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾಗಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಜೊತೆಗೆ ಮಾನ್ಯತೆ ಹೊಂದಿರುವ ಕಾನೂನುಬದ್ಧ ಚಾಲನಾ ಪರವಾನಗಿ (Driving License) ಇರಬೇಕು.
  4. ಜೂನಿಯರ್ ಸರ್ವೆಂಟ್: ಎಸ್‌ಎಸ್‌ಎಲ್‌ಸಿ (SSLC) ಉತ್ತೀರ್ಣರಾಗಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ವಯೋಮಿತಿ ಮತ್ತು ಸಡಿಲಿಕೆ

ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ವಿವಿಧ ವರ್ಗಗಳಿಗೆ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:

  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗ (ಪ್ರವರ್ಗ-1): 40 ವರ್ಷಗಳು
  • ಇತರ ಹಿಂದುಳಿದ ವರ್ಗಗಳು (ಪ್ರವರ್ಗ 2A, 2B, 3A, 3B): 38 ವರ್ಷಗಳು
  • ಸಾಮಾನ್ಯ ಅಭ್ಯರ್ಥಿಗಳು (General/UR): 35 ವರ್ಷಗಳು

ವಿಶೇಷ ಸೂಚನೆ ಮತ್ತು ವಯೋಮಿತಿ ಸಡಿಲಿಕೆ: ವಿಕಲಚೇತನ ಹಾಗೂ ವಿಧವಾ ಮಹಿಳೆಯರಿಗೆ 10 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ. ಮಾಜಿ ಸೈನಿಕರಿಗೆ ಸೇವೆ ಸಲ್ಲಿಸಿದ ಅವಧಿಗೆ ಅನುಗುಣವಾಗಿ ಸಡಿಲಿಕೆ ಇರಲಿದೆ. ಸರ್ಕಾರದ ಆದೇಶದಂತೆ, ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ಒಮ್ಮೆಯ ವಯೋಮಿತಿ ಸಡಿಲಿಕೆಯನ್ನು (One Time Measure) ನೀಡಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳು (2A, 2B, 3A, 3B): ರೂ. 1,000/- + ಗೇಟ್‌ವೇ ಶುಲ್ಕ
  • SC / ST / ಪ್ರವರ್ಗ-1 / ವಿಕಲಚೇತನ / ಮಾಜಿ ಸೈನಿಕ ಅಭ್ಯರ್ಥಿಗಳು: ರೂ. 500/- + ಗೇಟ್‌ವೇ ಶುಲ್ಕ
  • ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್, ಯುಪಿಐ ಅಥವಾ ಗೂಗಲ್ ಪೇ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕು. ಡಿಡಿ/ಪೋಸ್ಟಲ್ ಆರ್ಡರ್ ಸ್ವೀಕರಿಸಲಾಗುವುದಿಲ್ಲ. ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಮತ್ತು ಶುಲ್ಕ ಕಡ್ಡಾಯ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ

ಎಲ್ಲಾ ಹುದ್ದೆಗಳ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ನಡೆಯುತ್ತದೆ.

  1. ಆನ್‌ಲೈನ್ ಅರ್ಜಿಗಳ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ.
  2. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
  3. ಸಂದರ್ಶನಕ್ಕೆ ಅರ್ಹತೆ ಪಡೆಯಲು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 85 ಅಂಕಗಳನ್ನು (ಶೇ. 35ರಷ್ಟು) ಮತ್ತು ಸಂದರ್ಶನದಲ್ಲಿ ಕನಿಷ್ಠ 15 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  4. ಲಿಖಿತ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ. ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲ ಇರುತ್ತದೆ.

ಲಿಖಿತ ಪರೀಕ್ಷೆಯ ಪಠ್ಯಕ್ರಮ (ಮ್ಯಾನೇಜರ್ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ – ಒಟ್ಟು 200 ಅಂಕಗಳು, ಅವಧಿ: 2 ಗಂಟೆ)

    • ಕನ್ನಡ ಭಾಷೆ : 50 ಅಂಕಗಳು
    • ಸಾಮಾನ್ಯ ಇಂಗ್ಲಿಷ್ ಭಾಷೆ : 25 ಅಂಕಗಳು
    • ಸಾಮಾನ್ಯ ಜ್ಞಾನ : 25 ಅಂಕಗಳು
    • ಸಹಕಾರ ವಿಷಯ (Co-operative Subject): 50 ಅಂಕಗಳು
    • ಭಾರತದ ಸಂವಿಧಾನ : 25 ಅಂಕಗಳು
    • ಬ್ಯಾಂಕಿಂಗ್, ಸಾಮಾಜಿಕ ಆರ್ಥಿಕ ಚಟುವಟಿಕೆಗಳು ಮತ್ತು ಗ್ರಾಹಕ ವ್ಯವಹಾರಗಳು: 25 ಅಂಕಗಳು

ಚಾಲಕ ಮತ್ತು ಜೂನಿಯರ್ ಸರ್ವೆಂಟ್ ಹುದ್ದೆಗಳಿಗೆ (ಒಟ್ಟು 100 ಅಂಕಗಳು, ಅವಧಿ: 1 ಗಂಟೆ)

  • ಕನ್ನಡ ಭಾಷೆ : 50 ಅಂಕಗಳು
  • ಸಾಮಾನ್ಯ ಜ್ಞಾನ : 50 ಅಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

1.ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಹಂತ 1.

ಬ್ಯಾಂಕಿನ ಅಧಿಕೃತ ವೆಬ್‌ಸೈಟ್ [https://www.bellarydcc.bank.in](https://www.bellarydcc.bank.in) ಗೆ ಭೇಟಿ ನೀಡಿ ಮತ್ತು “BDCC RECRUITMENT 2026” ಲಿಂಕ್ ಅನ್ನು ಓಪನ್ ಮಾಡಿ. ಸೂಚನೆಗಳನ್ನು ಜಾಗರೂಕರಾಗಿ ಓದಿ.

2.ನೋಂದಣಿ (Registration): ಹಂತ 2.

ನಿಮ್ಮ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಪ್ರಕಾರ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ, ಒಟಿಪಿ (OTP) ಪರಿಶೀಲನೆ ಮೂಲಕ ಯಶಸ್ವಿಯಾಗಿ ನೋಂದಣಿ ಮಾಡಿಕೊಳ್ಳಿ.

3.ವಿವರಗಳನ್ನು ಭರ್ತಿ ಮಾಡಿ ಮತ್ತು ಪರಿಶೀಲಿಸಿ: ಹಂತ 3.

ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿ ಲಾಗ್ ಇನ್ ಆಗಿ. ನಿಮ್ಮ ಶೈಕ್ಷಣಿಕ ಅರ್ಹತೆ ಮತ್ತು ಇತರ ಅಗತ್ಯ ವಿವರಗಳನ್ನು ನಮೂದಿಸಿ. ಸಬ್ಮಿಟ್ ಮಾಡುವ ಮುನ್ನ ಪ್ರಿವ್ಯೂ ಪರಿಶೀಲಿಸಿ.

4.ಫೋಟೋ, ಸಹಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ : ಹಂತ 4.

ಬಿಳಿ ಕಾಗದದ ಮೇಲೆ ಕಪ್ಪು ಸ್ಕೆಚ್/ಮಾರ್ಕರ್ ಪೆನ್‌ನಿಂದ ಸಹಿ ಮಾಡಿ, ಅದರ ಮೇಲೆ ಪಾಸ್‌ಪೋರ್ಟ್ ಅಳತೆಯ ಫೋಟೋ ಇಟ್ಟು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ (File size 100 KB ಗಿಂತ ಕಡಿಮೆ ಇರಬೇಕು). ಜೊತೆಗೆ ನಿಮ್ಮ ಎಲ್ಲಾ ಅಗತ್ಯ ಮೀಸಲಾತಿ ಹಾಗೂ ಅಂಕಪಟ್ಟಿಗಳನ್ನು ಸ್ವಯಂ ದೃಢೀಕರಿಸಿ (Self-attested) ಅಪ್‌ಲೋಡ್ ಮಾಡಿ.

5.ಅರ್ಜಿ ಶುಲ್ಕ ಪಾವತಿಸಿ: ಹಂತ 5.

ಕೊನೆಯದಾಗಿ ಪೇಮೆಂಟ್ ಗೇಟ್‌ವೇ ಲಿಂಕ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಬಳಸಿ ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ, ಅರ್ಜಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ.

ಹಿಂದೆ (06.04.2026) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ವಿಶೇಷ ಸೂಚನೆಗಳು

ದಿನಾಂಕ 06.04.2026 ಹಿಂದಿನ ಪ್ರಕಟಣೆಯಡಿ ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಪ್ರಸ್ತುತ ನೇಮಕಾತಿಗೂ ಕಡ್ಡಾಯವಾಗಿ ಮತ್ತೊಮ್ಮೆ ಆನ್ಲೈನ್ನಲ್ಲಿ ಹೊಸದಾಗಿ ನೋಂದಣಿ ಮಾಡಿ ಅರ್ಜಿ ಸಲ್ಲಿಸಬೇಕು. ಆದರೆ, ಅವರು ತಮ್ಮ ಹಳೆಯ ನೋಂದಣಿ ಸಂಖ್ಯೆಯನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಇಂತಹ ಅಭ್ಯರ್ಥಿಗಳಿಗೆ ಪ್ರಸ್ತುತ ಹುದ್ದೆಗಳಿಗೆ ಯಾವುದೇ ಪ್ರತ್ಯೇಕ ಶುಲ್ಕ ಪಾವತಿಯ ಅಗತ್ಯವಿರುವುದಿಲ್ಲ. ಹಳೆಯ ಶುಲ್ಕವನ್ನೇ ಪರಿಗಣಿಸಲಾಗುತ್ತದೆ. ಕುರಿತು ಮಾಹಿತಿಗಳನ್ನು ಅವರ ನೋಂದಾಯಿತ ಮೊಬೈಲ್ ಮತ್ತು ಇಮೇಲ್ಗೆ ಕಳುಹಿಸಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಾರದು? (ಅನರ್ಹತೆಗಳು)

  • ಕಡ್ಡಾಯವಾಗಿ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರದೇ ಇರುವವರು.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಹೊಂದಿಲ್ಲದವರು.
  • 18 ವರ್ಷಕ್ಕಿಂತ ಕಡಿಮೆ ಅಥವಾ ನಿಗದಿತ ಗರಿಷ್ಠ ವಯೋಮಿತಿಗಿಂತ ಹೆಚ್ಚು ವಯಸ್ಸಿನವರು.
  • ಹಿಂದುಳಿದ ವರ್ಗಗಳ ಕ್ರೀಮಿ ಲೇಯರ್ (Creamy Layer) ವ್ಯಾಪ್ತಿಗೆ ಬರುವ ಅಭ್ಯರ್ಥಿಗಳು ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಿಲ್ಲ (ಅವರು ಸಾಮಾನ್ಯ ವರ್ಗದಲ್ಲಿ ಸಲ್ಲಿಸಬೇಕು).
  • ಶೇ. 40 ಕ್ಕಿಂತ ಕಡಿಮೆ ವಿಕಲಚೇತನ ಹೊಂದಿದ್ದು ವಿಕಲಚೇತನ ಮೀಸಲಾತಿ ಕೋರುವವರು.
  • ನಕಲಿ ಅಥವಾ ಮಾನ್ಯತೆ ರಹಿತ ಸಂಸ್ಥೆಗಳಿಂದ ಪದವಿ/ಪ್ರಮಾಣಪತ್ರ ಪಡೆದವರು.
  • ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿಯರನ್ನು ಹೊಂದಿರುವ ಪುರುಷರು ಅಥವಾ ಈಗಾಗಲೇ ಮದುವೆಯಾಗಿರುವ ಪುರುಷನನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳು.
  • ಯಾವುದೇ ಬ್ಯಾನ್ ಮಾಡಲಾದ ಸಂಸ್ಥೆಯ ಸದಸ್ಯರಾಗಿದ್ದಲ್ಲಿ ಅಥವಾ ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರು.

ಪ್ರಮುಖ ಸೂಚನೆಗಳು

  • ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ (Probation Period) ಸೇವೆ ಸಲ್ಲಿಸಬೇಕಾಗುತ್ತದೆ.
  • ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ಸಂದರ್ಭದಲ್ಲಿ ಬ್ಯಾಂಕ್ ಸೂಚಿಸುವ ಭದ್ರತಾ ಠೇವಣಿ (Security Deposit) ಮತ್ತು ವೈಯಕ್ತಿಕ ಬಾಂಡ್ ಅನ್ನು ಸಲ್ಲಿಸಬೇಕಾಗುತ್ತದೆ.
  • ಪರೀಕ್ಷೆಯ ಪ್ರವೇಶ ಪತ್ರ ಮತ್ತು ಸಂದರ್ಶನದ ವಿವರಗಳನ್ನು ಎಸ್‌ಎಸ್‌ಎಚ್/ಇಮೇಲ್ ಅಥವಾ ವೆಬ್‌ಸೈಟ್ ಮೂಲಕವೇ ತಿಳಿಸಲಾಗುತ್ತದೆ, ಯಾವುದೇ ಪ್ರವೇಶ ಪತ್ರವನ್ನು ಅಂಚೆ ಮೂಲಕ ಕಳುಹಿಸುವುದಿಲ್ಲ.

ಬೆಳ್ಳಾರಿ ಡಿಸಿಸಿ ಬ್ಯಾಂಕ್ ನೇಮಕಾತಿ 2026 – ಪ್ರಮುಖ ಲಿಂಕ್‌ಗಳು (Important Links)

ವಿವರ ಲಿಂಕ್ ವಿವರಗಳು

ಆನ್‌ಲೈನ್ ಅರ್ಜಿ ನಮೂನೆ

 ಇಲ್ಲಿ ಕ್ಲಿಕ್ ಮಾಡಿ (Apply Online)

ಅಧಿಕೃತ ಅಧಿಸೂಚನೆ PDF

 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್

 www.bellarydcc.bank.in

Leave a Comment